ಅನ್ವೆಷಿಯ ಕಲ್ಪನಾ ಲೋಕ...

ಅನ್ವೆಷಿಯ ಕಲ್ಪನಾ ಲೋಕಕ್ಕೆ ನಿಮಗೆಲ್ಲಾ ಆದರದ ಸುಸ್ವಾಗತ...

Tuesday, October 9, 2012

ಮಂದ-ಹಾಸ


ನಾಲ್ಕು ಸಾಲಿನ ಕವಿತೆ!
ಮಂದ-ಹಾಸ

ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ,
ಪ್ರತಿ ಸಾಲಿಗೂ ಬೇಕು ಕಂಬನಿಯಒರತೆ,
ಸಾಲು ಸಾಲಾಗಿ ಕೊಂಡರೂಚಿಂತೆಗಳ ಕಂತೆ
ಮುಗಿದಂತೆ ಕಾಣದುಬದುಕಿನ ಸಂತೆ,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!               
                     ~೨~
ಅಳು ಅಳುತ್ತಲೇ ನಗಿಸುವುದು ಬದುಕಾದರೆ
ನಗಿಸುತ್ತಲೇ ಅಳಿಸುವುದು ಪ್ರೀತಿಯಂತೆ,
ಪ್ರೀತಿ ಕುರುಡು ಅಂದವರೇ ಎಲ್ಲರೂ
ಕಣ್ಣಿದ್ದೂ ಕುರುಡಾದರೇ ಪ್ರೀತಿಯೆದಿರು!
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!                    
                     ~೩~
ಯಾರಿಗೂ ಬೇಕಿಲ್ಲ ಸುಖ ಸೋಪಾನದ ಜತನ,
ದುಖಃ ದುಮ್ಮಾನಗಳೇ ಅಭಿವ್ಯಕ್ತಿಯ ಚೇತನ,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!                    
                      ~೪~
ಬದುಕೆಂದರೆ ಬರಿ ಅಲ್ಲಆಡಂಬರದ ಸಾಗರ,
ಹುಸಿ ಕೋಪ,ತುಸು ನಗುವ ಕನಸುಗಳಚಪ್ಪರದ ಅಂಬರ,
ಮನದ ಮುಗಿಲಲ್ಲಿ ಇರಲಿ ಕರಗದ ಆಸೆಯ ಕಾಮನ ಬಿಲ್ಲು
ಆಗಾಗ ಕೇಳುತಿರಲಿ ಸವಿಸಿಂಚನದ ತುಂತುರಿನ ಸೊಲ್ಲು,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!
             ~ಅನ್ವೇಷಿ~

Monday, September 24, 2012

ಅವಳೊಂದಿಗೆ ಆ ದಿನಗಳು...: ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...

ಅವಳೊಂದಿಗೆ ಆ ದಿನಗಳು...: ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...:         ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ... ಸುಮ್ಮನೆ ಯಾಕೆ ಬಂದೇ ...   ಈ ಪ್ರೀತಿನೆ ಹಾಗೆ ಒಂದು ದಿನದ ಒಂದು ಕ್ಷಣದ ಸೆಲೆಬ್ರೇಶನ್ ಅಲ್ಲ ..!...

ಅವಳೊಂದಿಗೆ ಆ ದಿನಗಳು...: ಅಕ್ಟೋಬರ್ ನ ಮಳೆ...

ಅವಳೊಂದಿಗೆ ಆ ದಿನಗಳು...: ಅಕ್ಟೋಬರ್ ನ ಮಳೆ...: ಅಕ್ಟೋಬರ್ ನ ಮಳೆ... ಅವಳ ನೆನಪಲ್ಲೀ.. ಸತ್ತ ಮೊದಲ ಪ್ರೀತಿಯ ಸಮಾಧಿಯ ಮೇಲೆ ಕುಳಿತ ಅವಳ ಮನಸಿಗೆ ನನ್ನ ಮಾತುಗಳು ಸಮಾಧಾನ ಅನಿಸಿರಬೆಕು. ಬಿಟ್ಟು ಹೊಗಿದ್ದು ಮರೆತು ...

Sunday, September 23, 2012

ಅವಳ ನೆನಪಲ್ಲೀ...: ನಿರೀಕ್ಷೆ...

ಅವಳ ನೆನಪಲ್ಲೀ...: ನಿರೀಕ್ಷೆ...: ಮುಗಿಯದ ಪಯಣ  ನಿರೀಕ್ಷೆ... ಅಪ್ಪನೆಂದರೆ ಅವ್ವನಿಗೆ ಆಧಾರ ಅವನಿಗೆ ಅವ್ವನೆಂದರೆ ಪ್ರಾಣ, ಮೂವರ ಜೀವನದ ಪಯಣ ಮುಗಿಯದ ದಾರಿಯಲ್ಲಿ ನಿಲ್ಲದೇ ಸಾಗಿತು ತೇರು,         ...

ನಿರೀಕ್ಷೆ...

ಮುಗಿಯದ ಪಯಣ 
ನಿರೀಕ್ಷೆ...

ಅಪ್ಪನೆಂದರೆ ಅವ್ವನಿಗೆ ಆಧಾರ
ಅವನಿಗೆ ಅವ್ವನೆಂದರೆ ಪ್ರಾಣ,

ಮೂವರ ಜೀವನದ ಪಯಣ
ಮುಗಿಯದ ದಾರಿಯಲ್ಲಿ
ನಿಲ್ಲದೇ ಸಾಗಿತು ತೇರು, 
          
ಕೊನೆಯವರೆಗೂ ಬರುವೆನೆಂದ ಯಜಮಾನ
ಈಗ ಜವರಾಯನ ಅತಿಥಿ,
ಬಲು ಕ್ರೂರವಾಗಿ ನಗುತ್ತಿತ್ತು ವಿಧಿ,

ಒತ್ತರಿಸಿ ಬಂದ ದುಃಖವೆಲ್ಲ
ಕತ್ತರಿಸಿ ಬಿದ್ದಿತ್ತು ಉಸಿರ ತಿತ್ತಿಗಳಲ್ಲಿ,
ದಾರಿ ಕವಲಾಗಿತ್ತು ಆಧಾರ ಕಳಚಿ ಹೋಗಿತ್ತು
ನಿಲ್ಲದೇ ಸಾಗಿದಳು ಅವ್ವ ನಿರಾಧಾರವಾಗಿ
ಕಲ್ಲುಮುಳ್ಳಿನ ಹಾದಿಯಲ್ಲಿ,

ಕೈ ಹಿಡಿದು ಮಗನ
ಅಳುವ ಮರೆಸಿ ಚಂಡಿ ಬಿಡಿಸಲೆಂದು
ಬಂದು ಕೂಡುತ್ತಿದ್ದಳು ಹತ್ತಿರದ ರೈಲು ನಿಲ್ದಾಣ
ನಿಲ್ಲದೆ ಓಡುವ ರೈಲು ತೋರಿಸಿ ಅಪ್ಪ ಬರುವನೆಂಬ
ಸುಳ್ಳೆ ಅವನಿಗೆ ಸಮಾಧಾನ,

ಸೂರ್ಯಮುಳುಗಿದ ಸಂಜೆಯಲ್ಲಿ
ದಾಳಿಯಿಟ್ಟಿದ್ದವು ಕರಿಮೋಡಗಳು
ತುಸು ಜೋರಾಗಿಯೆ ಬೀಳುತ್ತಿದ್ದವು
ಮಳೆಯ ಹನಿಗಳು,

ಕಾದ ಇಳೆಯಿಂದ ಹೊಮ್ಮಿತ್ತು
ನೆಮ್ಮದಿಯ ಬಿಸಿಯಸಿರು,
ಅವಳ ಜೀವ ಚೆಲ್ಲಿತ್ತು ಕೊನೆಯದಾಗಿ
ನಿಟ್ಟುಸಿರು,
ಇಂದಿಗೂ ಕಾಯುತ್ತಿರುವನು ಅವ್ವನಿಗಾಗಿ
ಯಾರು ಬಂದಂತಿಲ್ಲ ಅವನಿಗಾಗಿ!

                 ~ಅನ್ವೇಷಿ~

Monday, September 10, 2012

ಅವಳ ನೆನಪಲ್ಲೀ...

ಶೀರ್ಷಿಕೆ ಸೇರಿಸಿ
ಅವಳ ನೆನಪಲ್ಲೀ...
       (೧)
ಬಾನ ಅಂಚಿನ ತೀರದಲ್ಲಿ
ಕೊನೆ ಇಲ್ಲದ ಕಡಲು,
ನೆಸರನು ಓಡಿರುವಾ ಸೆರಲು
ಅದರ ಒಡಲು,
ಮತ್ತೆ ಮತ್ತೆ ಬಂದು ತಾಕಿವೆ
ನಿನ್ನ ನೆನಪಿನ ಅಲೆಗಳು,
ಗೆಳತೀ, ಕಂಬನಿಯಲ್ಲೆ ತುಂಬಿ ಹೋಗಿದೆ
ನನ್ನ ಮಡಿಲು,
            (೨)
ಗೆಳತೀ, ಹೇಗೆ ಹಿಡಿದು ಇಡಲಿ
ಈ ಹುಚ್ಚು ಮನಸ,
ನೀನಿರದೆ ಯುಗವಾಗಿದೆ
ಒಂದೊಂದು ನಿಮಿಷ,
ಪ್ರತಿ ಉಸಿರಲು ಬೆರೆತು
 ಹೋಗಿರಲು ನಿನ್ನ ಹೆಸರು,
ನೆನೆ ನೆನೆದು ಚೆಲ್ಲಿದೆ ನಿಟ್ಟುಸಿರು.

                           ~ಅನ್ವೇಷಿ ~

Saturday, September 8, 2012

vaastavada belaku

ಸುಳಿ 
ಭಾವನೆಗಳ ಸೆಳೆತಕ್ಕೆ ಸಿಕ್ಕು

 ಪ್ರೀತಿಯ ಸುಳಿಯಲ್ಲಿ ಬಿದ್ದವಳು,

ನಂಬಿಕೆಗೆ ಕೈ ಚಾಚಿದಳು! ನಾನು

ಅವಳ ಕೈ ಹಿಡಿದೆ, ವಾಸ್ತವದ

ಬದುಕು ಅರಿವಾದಾಗ ಕೈ

ಬಿಡಿಸಿಕೊಂಡು ದೂರಾದಳು?

ಮತ್ತೆ ನಾ ಭ್ರಮೆಯ ಸುಳಿಗೆ

ಸಿಕ್ಕಿಬಿದ್ದೆ !.


ವ್ಯತ್ಯಾಸ 

ಹೂವಿನ ಮೇಲಿನ ಇಬ್ಬನಿ

ನೋಡಲು ಬಲು ಚೆಂದ ಅದೇ

ನೋವಿನ ಕಂಗಳು ಕಂಬನಿಯಲ್ಲಿ

ಮಿಂದು ಮಂಜಾದರೆ ಬದುಕು

ಬಲು ಮಂದ !
             
                          ~ಅನ್ವೇಷಿ ~

Saturday, July 28, 2012

ಗೆಳತೀ...

ನಿನ್ನ ಪ್ರೀತಿಯು ...

ಗೆಳತೀ...

 ನನ್ನ ನಿನ್ನ ಪ್ರೀತಿ ಇದು ಹಗಲು ರಾತ್ರಿಗಳ ಹಾಗೆ 

ಒಂದು ಮತ್ತೊಂದು ಸೇರದೆ ಇದ್ದರೂ ...

ಒಂದರಹಿಂದೆ ಮತ್ತೊಂದು ಬಂದೆ ಬರುತ್ತದೆ ಅದು ಬದುಕಿನ ನಿಯಮ ...

ಎರಡು ದೇಹ ದೂರಾದರೂ ಮನಸು ಒಂದೇ ಆಗಿರುವಾಗ

 ಭಾವನೆಗಳ ಬೆಸುಗೆ ಬೇರೆ ಮಾಡಲು ಯಾವ ವಿಧಿಯು ಏನೂ ಮಾಡದು ...

ಪ್ರೀತಿ ಒಂದು ಸಾಕಲ್ಲವೇ ಉಸಿರು ಇರುವವರೆಗೂ...?

 

                                                                                         

ಭಾವ ತೀರ ಯಾನ...
ಏನು ಕಾರಣ ...

ಕಣ್ ಮುಚ್ಚಿದರೆ ಸಾಕು ನಿರಾಸೆಯ ಕತ್ತಲು...

ಕಣ್ ತೆರೆಯಲು ನೂರಾರು ಆಸೆಗಳು...

ಹೇಳಿದರೂ ಮುಗಿಯದ ಮಾತುಗಳ ನಡುವೆ

 ಜಾರಿಹೊಗಿವೆ ಎಲ್ಲ ಭಾವನೆಗಳು ...

ಬರೆದರೂ ಹಾಡಾಗದಂಥ ಕವಿತೆಗಳಿವು ..ಗೆಳತೀ 

ಸುಮ್ಮನೆ ಕುಳಿತರು ಬಿಡದೆ ಕಾಡುವ 

ಕಂಬನಿಗೆ ಏನೆಂದು ಹೇಳಲಿ ...?

ಮುತ್ತು ಕೊಟ್ಟರೆ ಮನಸು ಕೊಟ್ಟ ಹಾಗಲ್ಲ...

                                                                                                                                                                    ಬೇಗೆ ...

ನಾನು ಹೇಳಿದ ಸತ್ಯವಿದು ...

ನಿನ್ನ ದಾರಿ ಕಾಯುತ್ತ ಕುಳಿತಾಗ 

ಬಿಸಿಲು ಕೂಡಾ ಬೆಳದಿಂಗಲಾಗಿತ್ತು ...

ಗೆಳತೀ ...ಹಗಲು ಕಳೆದು ರಾತ್ರಿ ಬಂದರೂ 

ನೀನೆ ಬರಲಿಲ್ಲ ..

ಈಗ ಎ ಬೆಳದಿಂಗಳೂ ಕೂಡಾ ಬಿಸಿಲಾಗಿ ಕಾಡುತ್ತಿದೆ 

ಆದರೂ ನೀ ಬರಲೇ ಇಲ್ಲ ಯಾಕೆ ಹುಡುಗೀ ?

 

                                                                                    

                                                                        

                                           ನೀರಾಕರಣ ...

ಹೇಗೆ ಗೊತ್ತಾಗ ಬೇಕು ನಿನಗೆ  ನನ್ನ ಪ್ರೀತಿ 

ನಾನು ಮನ ಬಿಚ್ಚಿ ಹೇಳುವ ಮೊದಲೇ  

ನಿನ್ನ ಮನದ ಬಾಗೀಲು ಮುಚ್ಚಿ ಎದ್ದು ಹೋದವಳು ನೀನು ...

ಒಮ್ಮೆಯಾದರೂ ತಿರುಗಿ ನೋಡಲಿಲ್ಲ ...

ಗೆಳತೀ ಇಂದಿಗೂ ಕಾಯುತಿದೆ ಈ ಹುಚ್ಚು ಮನಸು ನಿನ್ನದೇ ದಾರಿ ಕಾಯುತಾ 

 ಒಮ್ಮೆ ನೀ ತಿರುಗಿ ನೋಡಬಾರದೇ ...?

 

 

 

                                                                                  ಇಂತೀ ನಿನ್ನ ಪ್ರೀತಿಯ ..

                                                                                                                  ಅನ್ವೇಷೀ                                       shiningmoon121@gmail.com                              

       http;//avalanenapalli.blogspot.com


Wednesday, July 25, 2012

ಒಂದೇ ಸಮನೇ ನಿಟ್ಟುಸಿರು ...

ನೀ ಬರುವ ದಾರಿಯಲ್ಲಿ 
 ಒಂದೇ ಸಮನೇ ನಿಟ್ಟುಸಿರು ...
ಮಣ್ಣಲ್ಲಿ ಮಣ್ಣಾಗಿ ಹೋಗಿದ್ದೆ ನಾನು ...ಅವಳ ಕಾಲ್ಗೆಜ್ಜೆಯ ಸದ್ದಿಗೆ ಉಸಿರು ಬಂತು 
ಅವಳ ಮುಡಿಯಿಂದ ಜಾರಿದ ಮಲ್ಲಿಗೆ ನನ್ನ ಅಡಿಗಳಲ್ಲಿ ನಗುತ್ತಿತ್ತು ..
ಸದ್ದಿಲ್ಲದೇ ಮಲಗಿತ್ತು ನನ್ನ ಆತ್ಮ ...
ಮೌನದಲ್ಲಿ ಮತ್ತೆ ಅವಳಿಗಾಗಿ ಕಾಯುವಂತೆ ಹೇಳಿತು ... 
ಒಂದು ಹೃದಯ ಎರಡು ಕನಸು 

ಹೇಗೆ ಹಿಡಿದು ಇಡಲಿ ಈ ಹುಚ್ಚು ಮನಸ..
ನೀನಿರದೆ ಯುಗವಾಗಿದೆ ಒಂದೊಂದು ನಿಮಿಷ 
ಪ್ರತಿ ಉಸಿರಲು ಬೆರೆತು ಹೋಗಿದೆ ನಿನ್ನ ಹೆಸರು ...
ಗೆಳತೀ ...
ನೆನೆ ನೆನೆದು ಚೆಲ್ಲಿದೆ ನಿಟ್ಟುಸಿರು ...
ನಾನು ಮನಸಾರೆ ...


ಬರೆದದ್ದು ಕವಿತೆ ಅಲ್ಲಾ ಗೆಳತೀ ..
ಅವು ನನ್ನ ಬಚ್ಚಿಟ್ಟ ನೆನಪುಗಳು ..
ಹೇಳಲು ಆಗದೆ ಉಳಿದು ಹೋದ ಪಿಸುಮಾತುಗಳು ..
ಅರಳುವ ಮುನ್ನವೇ ಬಾಡಿ ಹೋದ ನಮ್ಮ ಕನಸುಗಳು ..
ಮತ್ತೆ ಮತ್ತೆ ನಿನಗಾಗಿ ಕಾಯುತ್ತಿರುವ ನಮ್ಮ ಕಲ್ಪನೆಯ ಕೂಸುಗಳು ..
ನೀನಿಲ್ಲದೆ ...

ಗುರಿ ಇಲ್ಲದ ಮನಸು ಗರಿ ಮುರಿದ ಹಕ್ಕಿಯ ಹಾಗೆ ನೆಲೆ ತಪ್ಪಿ 
ಅಲೆಯುತಿರೆ ...
ಮೋಡಗಳ ಮೆರವಣಿಗೆ ಹೊರಟಿದೆ ನಿನ್ನೂರಿಗೆ..
ಗೆಳತಿ ..ನಮ್ಮ ಕನಸಿನ ತೇರು ಎಳೆಯಲು 
ಒಲವಿನ ಜಾತ್ರೆಯೇ ಅಲ್ಲಿ ಸೇರಿದೆ ...
ನಿನ್ನ ಒಂದು ಅಪ್ಪಣೆಗಾಗಿ  ನೀ ಒಮ್ಮೆ ಹೂ ನಗೆಯ ಚೆಲ್ಲಿದರೆ ಸಾಕು 
ನಮ್ಮ ಮಿಲನ ...
                                             ಇಂತಿ ನಿನ್ನ ಪ್ರೀತಿಯ ...
                                            ಅನ್ವೇಷಿ .....

ನಿರಾಸೆ ಬೇಡ ಗೆಳತೀ ...

ನೀ ನಗುವ ಮೊದಲು 
ನಿರಾಸೆ ಬೇಡ ಗೆಳತೀ ...ನಾನಿರುವೆ ಜೊತೆಯಾಗಿ ...
ಕಾಡುವ ಮನಸಿಗೆ ಭರವಸೆಯ ದನಿಯಾಗಿ ...
ಕಣ್ ಮುಚ್ಚಿ ಒಮ್ಮೆ ನೀ ನೆನೆದು ನೋಡು ...ಕಣ್ ಮುಂದೆ ಬರುವೆ ಆಸರೆಯಾಗಿ ...
ನಾನು ಮನಸಾರೆ ..
                                                                                                                                  ಜೀವನದಲ್ಲಿ ನಮ್ಮ ಬಲಹೀನತೆ ಯಾವಾಗಲೂ ಬೇರೆಯವರಿಂದ ಅನುಕಂಪವನ್ನು ಬಯಸುತ್ತೇ ...
ಅದು ತಪ್ಪು ಅಂತಾ ಗೊತ್ತಿದ್ದೂ ಬಯಸುತ್ತೇ..
ಆ ಅನುಕಂಪವೇ ಮುಂದೆ ಮಮಕಾರವಾಗಿ ..ಅದೇ ಮುಂದೆ ಪ್ರೀತಿಯಾಗಿ 
ಕೊನೆಗೆ ಎರಡು ಮನಸು ಆಕರ್ಷಣೆಯಿಂದ ಒಂದಾಗುತ್ತವೆ ...ಬಿಟ್ಟಿರಲಾಗದಷ್ಟೂ  ಹತ್ತಿರವಾಗುತ್ತವೆ ...ಆದರೆ ಆ ಎರಡು ಮನಸಿನ ನಡುವೆ  ಅನುಬಂಧ    ಅನ್ನೋದು ಸದಾ  ಇರಲೇಬೇಕು   ಅಲ್ವಾ...?


ನಿನ್ನದೇ ನೆನಪು ದಿನವು 


                                                                                                                             ನನ್ನ ಮನದ       ಅಂಗಳದಲ್ಲಿ           ನೀ....        ನೆಟ್ಟ ಮಲ್ಲಿಗೆ ಗಿಡದಲ್ಲಿ ...
ತುಂಬಿ ಚೆಲ್ಲಿದೆ ಅರಳಿದ ಹೂಗಳೂ ...
ಅವು ಬಾಡುವ ಮುನ್ನ ಒಮ್ಮೆ ನೀ ಬಂದು ಮುಡಿದು ಹೋಗು ...
ನಿನ್ನ ಒಲವಿನ ಕಂಪು ಉಳಿಸಿ ಹೋಗು ...                                                                                                        ಇಂತಿನಿನ್ನಪ್ರೀತಿಯ ...                                                                    ಅನ್ವೇಷಿ 
             

Saturday, July 21, 2012

ಕಣ್ಣ ಹನಿಯೊಂದಿಗೆ...

ಕಣ್ಣ ಹನಿಯೊಂದಿಗೆ...
ನನ್ನನು ಕಣ್ಣ ರೆಪ್ಪೆಯೊಳಗೆ ಇಟ್ಟು ಕೊಳ್ಳಬೇಡ ಗೆಳತೀ...
ತುಂಬಿ ತುಳುಕುವ ಕನಸುಗಳ ನಡುವೆ ಕಳೆದು ಹೋದೆನು..!
ನಿನ್ನ ಬೆಚ್ಚಗಿನ ಹೃದಯದಲ್ಲಿ ಇಟ್ಟುಕೋ ...
ಪ್ರತಿ ಉಸಿರಲ್ಲೂ ಸದಾ ಹೆಸರಾಗಿ 
ಕೊನೆ ಉಸಿರ ವರೆಗೂ ಜೊತೆಯಾಗಿ ಬರುವೇ ...!

ಮತ್ತೆ ಮತ್ತೆ ಎದೆಯ ಕದವ ತೆರೆದೆ 
ಕಿವಿಗೊಟ್ಟು ಕೇಳಿದೆ ...?
ಯಾವ ಮಾಯದಲ್ಲೋ ನೀ ಬಂದು ನನ್ನ ಎದೆಯ ಆವರಿಸಿದೆ!
ಬತ್ತಿ ಹೋದ ಒಲವಿನ ಸೆಲೆಗೆ ಮತ್ತೆ ಜೀವ ತುಂಬಿದೆ...
ಗೆಳತಿ...ನೀ ಯಾರೇ ...?
                                                                                                                                                                                                 ಈ ಬದುಕು ಎಷ್ಟು ವಿಚಿತ್ರ ಗೊತ್ತಾ 
                                                                                                            ಗೆಳತೀ ...
                                                                                   ಸಂತೋಷದ ಸಂಭ್ರಮಗಳು..ಹೀಗೆ ಬಂದು ಹಾಗೆ ಸೋಕಿ 
                                                                                                  ಹೋಗುವ ತಂಗಾಳಿಯ ಹಾಗೆ....
                                                                                   ನಿರಾಸೆಯ ಸುಳಿಗೆ ಸಿಕ್ಕು ನಂಬಿಕೆಯ ಮೂಲಗಳೇ  ಕಿತ್ತು 
                                                                                          ಹೋಗಿರಲು ಬದುಕಿಗೆ ಭರವಸೆಯ ಬೆಳಕು ಎಲ್ಲಿದೇ ...
                                                                            

                                                                                                                      ಇಂತಿ ನಿನ್ನ ...
                                                                                                                                          ಅನ್ವೇಷಿ .... 
                                                              

ನೆನಪುಗಳ ಮಾತು ಮಧುರ ....

ನೆನಪುಗಳ ಮಾತು ಮಧುರ
           ನೆನಪುಗಳ ಮಾತು ಮಧುರ 

   ಪದೇ  ಪದೇ  ನೆನಪಾಗುವ ನಿನ್ನ ನೆನಪುಗಳಿಗೆ ಸೋತು      ನಿನ್ನದೇ ಕನವರಿಕೆಯಲ್ಲಿ ಬದುಕುತ್ತಿದ್ದೇನೆ ....
ಗೆಳತೀ ಸಿಹಿ ಕನಸುಗಳವು ಅರ್ಧ ಬರೆದಿಟ್ಟ ಕವನದ ಸಾಲಿನಂತೆ 
ಕಾಡುತಿವೆ ....
ಸ್ವಾತಿಯ ಮಳೆ ಹನಿಗೆ ಮಿಂದ ಇಳೆಯ ಘಮದಂತೆ ...
ತುಂತುರು ಹನಿಗಳು ಮುತ್ತಿಟ್ಟ ಚಿಗುರೆಲೆಯ ನಗುವು ನಿನ್ನ ನೆನಪು ... 


ಕನಸುಗಳ ಕಲರವ ನನ್ನ ಮನದಲ್ಲಿ ...
ಆಸೆಯ ತಂಗಾಳಿ ತನುವ ಸೋಕಲು ...
ಮಿಂಚಿ ಮರೆಯಾಗುವ ಆ ನೆನಪುಗಳ ಗೂಡಿಗೆ 
ಕೈ ಚಾಚಿದೆ ಹುಚ್ಚು ಮನಸು ....
ಕೈ ಜಾರಿದ ಒಲವು ಕಂಡು ಮರೆಯಾದ ಕಾಲವು ಕೂಡ 
ಮತ್ತೆ ಮತ್ತೆ ನೆನಪುಗಳ ಮೂಟೆ  ಹೊತ್ತಿದೆ ...
ಆ ನೆನಪುಗಳ ಉಸಿರು ಹೊತ್ತ ಹೃದಯ ಮತ್ತೆ ಮತ್ತೆ ನಿಟ್ಟುಸಿರ ಚೆಲ್ಲಿದೆ ...
ನಿನ್ನ ನೆನಪಲ್ಲಿ....!!!!  
                                                                       
                                                        ಇಂತಿ ನಿನ್ನ ನೆನಪುಗಳ ಮಾಲೀಕ ...
                                                                                                                                                  ಅನ್ವೇಷಿ ...!!!                                                             

ಒಂದು ಮೌನ ಗೀತೆ

                                                                                        
                                                                      ಒಂದು ಮೌನ ಗೀತೆ                                
ಕತ್ತಲೆಯ ಬದುಕಿಗೆ ಬೆಳಕಾಗಿ ಬಂದವಳು 
ಪ್ರೇಮದ ಬೆಳಕಲ್ಲಿ ...
ನೂರಾರು ಕನಸು ಬಿತ್ತಿದಳು !
ಅರಳಿದ ಕನಸುಗಳ ತೋಟಕ್ಕೆ
 ನನ್ನ ಕಾವಲಿಗೆ ಬಿಟ್ಟು 
ಕೊನೆಗೆ ಒಂದು ಕಾರಣವು ಹೇಳೆದೆ 
ದೂರಾಗಿ ಹೋದಳು ...
                                       ಅನ್ವೇಷಿ       

Friday, July 13, 2012

ಹಾಗೇ ಸುಮ್ಮನೇ

 ಹಾಗೇ ಸುಮ್ಮನೇ...
ಹಾಗೇ ಸುಮ್ಮನೇ 
ಅವಳು ನೋಡುತ್ತಾಳೆ ...ಸುಮ್ಮನೆ ನಗುತ್ತಾಳೆ ಒಂದು ಮಾತನಾಡದೆ...ಮೌನದಲಿ ಪಿಸುಗುಡುತ್ತಾ    ಈ ಮನದ ಗೂಡಲ್ಲಿ  ಅಡಗಿ ಕುಳಿತು ...ಬೆಚ್ಚಗೆ ನಿಟ್ಟುಸಿರಾಗುತ್ತಾಳೆ...     

ಒಡೆದು ಹೋದ ಹೃದಯದ ಅರಮನೆಯಲ್ಲಿ...  
ಚೂರಾದ ಕನಸುಗಳು ನೂರಾರು  ಗೆಳತೀ .. 
ಮೆಲ್ಲಗೆ ನಡೆದು ಹೋಗು ನೀ ..                                   ಚುಚ್ಚದಿರಲಿ  ನಿನ್ನ  ಕಾಲ್ಗಳಿಗೆ  ನನ್ನ ಪ್ರೀತಿಯ  ನೆನಪುಗಳು... 
                   ಇಂತಿ ನಿನ್ನ ಪ್ರೀತಿಯ 
                                                                                                                                                                                                     ಅನ್ವೇಷಿ 

Tuesday, July 10, 2012

ಆ ಕ್ಷಣಗಳು ...

ಒಲವಿನ  ಸಂತೆಯಲಿ ಮನಸುಗಳ ಮಾರಾಟ 
ಕನಸುಗಳ ಕವಲು ದಾರಿಯಲಿ ..ಕಂಬನಿಯ ಜೂಜಾಟ 
ಒಂದು ತಿರಸ್ಕಾರದ ಹಿಂದೆ ನೂರಾರು ಕಾರಣಗಳು ..
ಗೆಳತೀ ... ಮತ್ತೆ ಬಾರದು ಕಳೆದು ಹೋದ ಆ ಕ್ಷಣಗಳು ...
ಆ ಕ್ಷಣಗಳು ...ಗೆಳತೀ ...ಕಾತರಿಸುತಿದೆ ಮನ ಒಮ್ಮೆ ನೀ ಬಂದುಹೋಗು 
ರೆಪ್ಪೆ ಮುಚ್ಚದ ಕಂಗಳಿಗೆ ಕನಸು ಕೊಟ್ಟು ಹೋದವಳೇ..
ನಿದಿರೆ ಇಲ್ಲದ ರಾತ್ರಿಗಳಿವು ..
ನೆನಪುಗಳು ಬೇಡ ..ನಿನ್ನ ನಗುವ ಜೋಗುಳ ಹಾಡಿ ಹೋಗು 

Sunday, July 8, 2012

ನಿನಗಾಗೀ...ನಲ್ಲೆ...  ನಿನ್ನದೇ ನೆನಪು ದಿನವು ಮನದಲ್ಲಿ...
ನಿನ್ನ ನಗು ಮೊಗದಲ್ಲಿ ಯಾಕೆ 
ಈ ಕಾತುರದ ಯೋಚನೆಯ ಅಲೆಗಳು ...
ಅದುರುವ ಅಧರದಿ ಕಾಣದಾಗಿದೆ ಆ ಹೂ ನಗು...
ಕೇಳದೇ ನನ್ನ ಈ ಮನದ ಮೌನದ ಹಾಡು...
ಮತ್ತೆ ಮತ್ತೆ ಕೇಳುತಿರುವೆ  ಮೌನದಲಿ ನಿನ್ನದೇ ನಗುವಿನ ಹಾಡು ...
                                            ಇಂತಿ ನಿನ್ನ ಪ್ರೀತಿಯ ....
                                                        ಅನ್ವೇಷಿ
                                               ಈ ನಿನ್ನ ಅನಾಮಿಕ