ಅನ್ವೆಷಿಯ ಕಲ್ಪನಾ ಲೋಕ...

ಅನ್ವೆಷಿಯ ಕಲ್ಪನಾ ಲೋಕಕ್ಕೆ ನಿಮಗೆಲ್ಲಾ ಆದರದ ಸುಸ್ವಾಗತ...

Wednesday, July 25, 2012

ಒಂದೇ ಸಮನೇ ನಿಟ್ಟುಸಿರು ...

ನೀ ಬರುವ ದಾರಿಯಲ್ಲಿ 
 ಒಂದೇ ಸಮನೇ ನಿಟ್ಟುಸಿರು ...
ಮಣ್ಣಲ್ಲಿ ಮಣ್ಣಾಗಿ ಹೋಗಿದ್ದೆ ನಾನು ...ಅವಳ ಕಾಲ್ಗೆಜ್ಜೆಯ ಸದ್ದಿಗೆ ಉಸಿರು ಬಂತು 
ಅವಳ ಮುಡಿಯಿಂದ ಜಾರಿದ ಮಲ್ಲಿಗೆ ನನ್ನ ಅಡಿಗಳಲ್ಲಿ ನಗುತ್ತಿತ್ತು ..
ಸದ್ದಿಲ್ಲದೇ ಮಲಗಿತ್ತು ನನ್ನ ಆತ್ಮ ...
ಮೌನದಲ್ಲಿ ಮತ್ತೆ ಅವಳಿಗಾಗಿ ಕಾಯುವಂತೆ ಹೇಳಿತು ... 
ಒಂದು ಹೃದಯ ಎರಡು ಕನಸು 

ಹೇಗೆ ಹಿಡಿದು ಇಡಲಿ ಈ ಹುಚ್ಚು ಮನಸ..
ನೀನಿರದೆ ಯುಗವಾಗಿದೆ ಒಂದೊಂದು ನಿಮಿಷ 
ಪ್ರತಿ ಉಸಿರಲು ಬೆರೆತು ಹೋಗಿದೆ ನಿನ್ನ ಹೆಸರು ...
ಗೆಳತೀ ...
ನೆನೆ ನೆನೆದು ಚೆಲ್ಲಿದೆ ನಿಟ್ಟುಸಿರು ...
ನಾನು ಮನಸಾರೆ ...


ಬರೆದದ್ದು ಕವಿತೆ ಅಲ್ಲಾ ಗೆಳತೀ ..
ಅವು ನನ್ನ ಬಚ್ಚಿಟ್ಟ ನೆನಪುಗಳು ..
ಹೇಳಲು ಆಗದೆ ಉಳಿದು ಹೋದ ಪಿಸುಮಾತುಗಳು ..
ಅರಳುವ ಮುನ್ನವೇ ಬಾಡಿ ಹೋದ ನಮ್ಮ ಕನಸುಗಳು ..
ಮತ್ತೆ ಮತ್ತೆ ನಿನಗಾಗಿ ಕಾಯುತ್ತಿರುವ ನಮ್ಮ ಕಲ್ಪನೆಯ ಕೂಸುಗಳು ..
ನೀನಿಲ್ಲದೆ ...

ಗುರಿ ಇಲ್ಲದ ಮನಸು ಗರಿ ಮುರಿದ ಹಕ್ಕಿಯ ಹಾಗೆ ನೆಲೆ ತಪ್ಪಿ 
ಅಲೆಯುತಿರೆ ...
ಮೋಡಗಳ ಮೆರವಣಿಗೆ ಹೊರಟಿದೆ ನಿನ್ನೂರಿಗೆ..
ಗೆಳತಿ ..ನಮ್ಮ ಕನಸಿನ ತೇರು ಎಳೆಯಲು 
ಒಲವಿನ ಜಾತ್ರೆಯೇ ಅಲ್ಲಿ ಸೇರಿದೆ ...
ನಿನ್ನ ಒಂದು ಅಪ್ಪಣೆಗಾಗಿ  ನೀ ಒಮ್ಮೆ ಹೂ ನಗೆಯ ಚೆಲ್ಲಿದರೆ ಸಾಕು 
ನಮ್ಮ ಮಿಲನ ...
                                             ಇಂತಿ ನಿನ್ನ ಪ್ರೀತಿಯ ...
                                            ಅನ್ವೇಷಿ .....

1 comment:

nimma abhipraya