ಅನ್ವೆಷಿಯ ಕಲ್ಪನಾ ಲೋಕ...





ಅನ್ವೆಷಿಯ ಕಲ್ಪನಾ ಲೋಕಕ್ಕೆ ನಿಮಗೆಲ್ಲಾ ಆದರದ ಸುಸ್ವಾಗತ...

Sunday, March 6, 2016


ಚದುರಂಗ
ಆಟ ಆಟದಲ್ಲಿ ಆಡಿದವರೇ ಎಲ್ಲರೂ,
ಆಟವಾಡುತ್ತಲೇ ಆಟ ಕಲಿಯುತ್ತಲೇ ಆಟಗಾರರಾದವರೂ ಕೂಡ ಸೋತುಹೋಗಿದ್ದು ಇದೇ ಆಟದಲ್ಲಿ!
ಆಡಿ ಆಡಿ ಕೊನೆಗೆ ಇದೇ ಆಟದಿಂದ ಆಳಿದವರೂ ಕೂಡ ಅಳಿದುಹೋಗಿದ್ದು,
ಸೈನಿಕರಿಂದಲೇ ಗೆಲ್ಲಬಲ್ಲ ಸೈನ್ಯಕ್ಕೆ ಒಂಟೆ, ಕುದುರೆ, ಆನೆಗಳಿಂದ ವ್ಯೂಹರಚಿಸಿ ಮಂತ್ರಿ ಮುಂದೆ ನಿಂತು ರಾಣಿಯ ಪಣಕ್ಕಿಟ್ಟು ರಾಜನ ಗೆಲ್ಲಿಸಲು ಎದುರಾಳಿಗಳ ಕಣ್ ತಪ್ಪಿಸಿ ಆಟಗಾರನ ಮೆದುಳಿಗೆ ಕೈ ಹಾಕಿ ಪ್ರತಿ ಯೋಚನೆಯ ಜಾಡು ಮೊದಲೇ ತಿಳಿದು
ಏಟಿಗೆ ಪ್ರತಿ ಏಟು ಎಂಬಂತೆ ಗೆಲ್ಲಬೇಕೆನ್ನುವ ಹಟಕ್ಕೆ ಸೊತಂತೆ ತೋರಿಸಿ ಒಂದೇ ಹೆಜ್ಜೆಯಲಿ ಗೆಲ್ಲಲು ಬಲ್ಲವರ ರಂಗ ಇದುವೇ
ಚದುರಂಗ!

ಅನ್ವೇಷಿ.


Saturday, March 5, 2016

ನೆನಪು


   ನಮ್ಮ ಭಾಷೆಯ ಮೇಲೆ ನಮಗೆ ಹಿಡಿತವಿರಬೇಕು ಆಗಲೇ ನಮ್ಮ ಮಾತಿನ ಗಾಢ ಪ್ರಭಾವ ಕೇಳುಗರ ಹೃದಯ ತಟ್ಟುತ್ತದೆ ಮತ್ತು ಪ್ರತೀ ಸಾರಿಯು ಮತ್ತೆ ಮತ್ತೆ ಕೇಳಬೆಕೆನಿಸುತ್ತದೆ. ಬರವಣಿಗೆಯಲ್ಲೂ ಸಹ ಅಷ್ಟೇ ಓದುಗರ ನಾಡಿಮಿಡಿತವನ್ನ ಹಿಡಿದಿಟ್ಟುಕೊಂಡಂತೆ ಅವರ ಮನದಾಳಕ್ಕೆ ನಮ್ಮ ಬರವಣಿಗೆಯ ಹಿಂದಿನ ಭಾವನೆಗಳು ಅವರ ಮನಸಿಗೆ ಇಷ್ಟವಾಗುವ ಹಾಗೆ ಬರೆಯಬೇಕು.
ಪ್ರತೀಯೊಂದು ಕಥೆಯು ಒದುಗರಿಗೆ ಇಷ್ಟವಾಗಲು ಮುಖ್ಯವಾಗಿ ೩ ಅಂಶಗಳು ಬರಹಗಾರನು ಅರ್ಥಮಾಡಿಕೊಂಡಿರಬೇಕು ಕತೆಯ ಆರಂಭವು ಕುತೂಹಲವಾಗಿರಬೇಕು, ಮಧ್ಯಂತರವು ಪ್ರಶ್ನಾರ್ಥಕವಾಗಿರಬೇಕು, ಅಂತ್ಯವು ಹೃದಯಸ್ಪರ್ಶಿಯಾಗಿರಬೇಕು.
ಮತ್ತು ಪ್ರತೀ ಕಥೆಯೂ ಒದುಗನಿಗೆ ಎಲ್ಲೋ ಒಂದುಕಡೆ ತನ್ನದೇ ಹಳೆಯ ನೆನಪುಗಳನ್ನು ಕೆದಕಿದ ಹಾಗೆ ಮತ್ತೆ ಕಾಡಿದಂತಾಗಿರಬೇಕು.