ಅನ್ವೆಷಿಯ ಕಲ್ಪನಾ ಲೋಕ...





ಅನ್ವೆಷಿಯ ಕಲ್ಪನಾ ಲೋಕಕ್ಕೆ ನಿಮಗೆಲ್ಲಾ ಆದರದ ಸುಸ್ವಾಗತ...

Saturday, July 28, 2012

ಗೆಳತೀ...

ನಿನ್ನ ಪ್ರೀತಿಯು ...

ಗೆಳತೀ...

 ನನ್ನ ನಿನ್ನ ಪ್ರೀತಿ ಇದು ಹಗಲು ರಾತ್ರಿಗಳ ಹಾಗೆ 

ಒಂದು ಮತ್ತೊಂದು ಸೇರದೆ ಇದ್ದರೂ ...

ಒಂದರಹಿಂದೆ ಮತ್ತೊಂದು ಬಂದೆ ಬರುತ್ತದೆ ಅದು ಬದುಕಿನ ನಿಯಮ ...

ಎರಡು ದೇಹ ದೂರಾದರೂ ಮನಸು ಒಂದೇ ಆಗಿರುವಾಗ

 ಭಾವನೆಗಳ ಬೆಸುಗೆ ಬೇರೆ ಮಾಡಲು ಯಾವ ವಿಧಿಯು ಏನೂ ಮಾಡದು ...

ಪ್ರೀತಿ ಒಂದು ಸಾಕಲ್ಲವೇ ಉಸಿರು ಇರುವವರೆಗೂ...?

 

                                                                                         

ಭಾವ ತೀರ ಯಾನ...
ಏನು ಕಾರಣ ...

ಕಣ್ ಮುಚ್ಚಿದರೆ ಸಾಕು ನಿರಾಸೆಯ ಕತ್ತಲು...

ಕಣ್ ತೆರೆಯಲು ನೂರಾರು ಆಸೆಗಳು...

ಹೇಳಿದರೂ ಮುಗಿಯದ ಮಾತುಗಳ ನಡುವೆ

 ಜಾರಿಹೊಗಿವೆ ಎಲ್ಲ ಭಾವನೆಗಳು ...

ಬರೆದರೂ ಹಾಡಾಗದಂಥ ಕವಿತೆಗಳಿವು ..ಗೆಳತೀ 

ಸುಮ್ಮನೆ ಕುಳಿತರು ಬಿಡದೆ ಕಾಡುವ 

ಕಂಬನಿಗೆ ಏನೆಂದು ಹೇಳಲಿ ...?

ಮುತ್ತು ಕೊಟ್ಟರೆ ಮನಸು ಕೊಟ್ಟ ಹಾಗಲ್ಲ...

                                                                                                                                                                    ಬೇಗೆ ...

ನಾನು ಹೇಳಿದ ಸತ್ಯವಿದು ...

ನಿನ್ನ ದಾರಿ ಕಾಯುತ್ತ ಕುಳಿತಾಗ 

ಬಿಸಿಲು ಕೂಡಾ ಬೆಳದಿಂಗಲಾಗಿತ್ತು ...

ಗೆಳತೀ ...ಹಗಲು ಕಳೆದು ರಾತ್ರಿ ಬಂದರೂ 

ನೀನೆ ಬರಲಿಲ್ಲ ..

ಈಗ ಎ ಬೆಳದಿಂಗಳೂ ಕೂಡಾ ಬಿಸಿಲಾಗಿ ಕಾಡುತ್ತಿದೆ 

ಆದರೂ ನೀ ಬರಲೇ ಇಲ್ಲ ಯಾಕೆ ಹುಡುಗೀ ?

 

                                                                                    

                                                                        

                                           ನೀರಾಕರಣ ...

ಹೇಗೆ ಗೊತ್ತಾಗ ಬೇಕು ನಿನಗೆ  ನನ್ನ ಪ್ರೀತಿ 

ನಾನು ಮನ ಬಿಚ್ಚಿ ಹೇಳುವ ಮೊದಲೇ  

ನಿನ್ನ ಮನದ ಬಾಗೀಲು ಮುಚ್ಚಿ ಎದ್ದು ಹೋದವಳು ನೀನು ...

ಒಮ್ಮೆಯಾದರೂ ತಿರುಗಿ ನೋಡಲಿಲ್ಲ ...

ಗೆಳತೀ ಇಂದಿಗೂ ಕಾಯುತಿದೆ ಈ ಹುಚ್ಚು ಮನಸು ನಿನ್ನದೇ ದಾರಿ ಕಾಯುತಾ 

 ಒಮ್ಮೆ ನೀ ತಿರುಗಿ ನೋಡಬಾರದೇ ...?

 

 

 

                                                                                  ಇಂತೀ ನಿನ್ನ ಪ್ರೀತಿಯ ..

                                                                                                                  ಅನ್ವೇಷೀ                                       shiningmoon121@gmail.com                              

       http;//avalanenapalli.blogspot.com


1 comment:

  1. ಅವಳ ನೆನಪಲ್ಲಿ ಯಾತನೆಯಿದೆ...

    ಪ್ರೀತಿ ಹೇಳುವ ಮೊದಲೇ ಎದ್ದು ಹೋದಳಲ್ಲ ಎನ್ನುವ ಬೇಸರವಿದೆ...

    ಯಾವಾಗಲಾದರೂ ತಿರುಗಿ ಬಂದಾಳೇನೋ ಎನ್ನುವ ಕಾತರವಿದೆ....

    ಈ ಎಲ್ಲ ತ್ರಿಶಂಕುಗಳ ನಡುವೆಯೇ

    ಅವಳ ನೆನಪಲ್ಲೊಂದು ಸಂತಸದ ಅನುಭಾವದ ಬಂಧವಿದೆ....

    ಅಲ್ವಾ?

    ತುಂಬಾ ಚನ್ನಾಗಿದೆ ದೊರೆ.....

    ನನ್ನ ಬ್ಲಾಗಿನ ಬಂಧುವಾಗಿದ್ದೀರಾ....

    ಖುಷಿಯಾಗಿದೆ ನನಗೆ....

    ReplyDelete

nimma abhipraya