ಅನ್ವೆಷಿಯ ಕಲ್ಪನಾ ಲೋಕ...





ಅನ್ವೆಷಿಯ ಕಲ್ಪನಾ ಲೋಕಕ್ಕೆ ನಿಮಗೆಲ್ಲಾ ಆದರದ ಸುಸ್ವಾಗತ...

Sunday, March 6, 2016


ಚದುರಂಗ
ಆಟ ಆಟದಲ್ಲಿ ಆಡಿದವರೇ ಎಲ್ಲರೂ,
ಆಟವಾಡುತ್ತಲೇ ಆಟ ಕಲಿಯುತ್ತಲೇ ಆಟಗಾರರಾದವರೂ ಕೂಡ ಸೋತುಹೋಗಿದ್ದು ಇದೇ ಆಟದಲ್ಲಿ!
ಆಡಿ ಆಡಿ ಕೊನೆಗೆ ಇದೇ ಆಟದಿಂದ ಆಳಿದವರೂ ಕೂಡ ಅಳಿದುಹೋಗಿದ್ದು,
ಸೈನಿಕರಿಂದಲೇ ಗೆಲ್ಲಬಲ್ಲ ಸೈನ್ಯಕ್ಕೆ ಒಂಟೆ, ಕುದುರೆ, ಆನೆಗಳಿಂದ ವ್ಯೂಹರಚಿಸಿ ಮಂತ್ರಿ ಮುಂದೆ ನಿಂತು ರಾಣಿಯ ಪಣಕ್ಕಿಟ್ಟು ರಾಜನ ಗೆಲ್ಲಿಸಲು ಎದುರಾಳಿಗಳ ಕಣ್ ತಪ್ಪಿಸಿ ಆಟಗಾರನ ಮೆದುಳಿಗೆ ಕೈ ಹಾಕಿ ಪ್ರತಿ ಯೋಚನೆಯ ಜಾಡು ಮೊದಲೇ ತಿಳಿದು
ಏಟಿಗೆ ಪ್ರತಿ ಏಟು ಎಂಬಂತೆ ಗೆಲ್ಲಬೇಕೆನ್ನುವ ಹಟಕ್ಕೆ ಸೊತಂತೆ ತೋರಿಸಿ ಒಂದೇ ಹೆಜ್ಜೆಯಲಿ ಗೆಲ್ಲಲು ಬಲ್ಲವರ ರಂಗ ಇದುವೇ
ಚದುರಂಗ!

ಅನ್ವೇಷಿ.


Saturday, March 5, 2016

ನೆನಪು


   ನಮ್ಮ ಭಾಷೆಯ ಮೇಲೆ ನಮಗೆ ಹಿಡಿತವಿರಬೇಕು ಆಗಲೇ ನಮ್ಮ ಮಾತಿನ ಗಾಢ ಪ್ರಭಾವ ಕೇಳುಗರ ಹೃದಯ ತಟ್ಟುತ್ತದೆ ಮತ್ತು ಪ್ರತೀ ಸಾರಿಯು ಮತ್ತೆ ಮತ್ತೆ ಕೇಳಬೆಕೆನಿಸುತ್ತದೆ. ಬರವಣಿಗೆಯಲ್ಲೂ ಸಹ ಅಷ್ಟೇ ಓದುಗರ ನಾಡಿಮಿಡಿತವನ್ನ ಹಿಡಿದಿಟ್ಟುಕೊಂಡಂತೆ ಅವರ ಮನದಾಳಕ್ಕೆ ನಮ್ಮ ಬರವಣಿಗೆಯ ಹಿಂದಿನ ಭಾವನೆಗಳು ಅವರ ಮನಸಿಗೆ ಇಷ್ಟವಾಗುವ ಹಾಗೆ ಬರೆಯಬೇಕು.
ಪ್ರತೀಯೊಂದು ಕಥೆಯು ಒದುಗರಿಗೆ ಇಷ್ಟವಾಗಲು ಮುಖ್ಯವಾಗಿ ೩ ಅಂಶಗಳು ಬರಹಗಾರನು ಅರ್ಥಮಾಡಿಕೊಂಡಿರಬೇಕು ಕತೆಯ ಆರಂಭವು ಕುತೂಹಲವಾಗಿರಬೇಕು, ಮಧ್ಯಂತರವು ಪ್ರಶ್ನಾರ್ಥಕವಾಗಿರಬೇಕು, ಅಂತ್ಯವು ಹೃದಯಸ್ಪರ್ಶಿಯಾಗಿರಬೇಕು.
ಮತ್ತು ಪ್ರತೀ ಕಥೆಯೂ ಒದುಗನಿಗೆ ಎಲ್ಲೋ ಒಂದುಕಡೆ ತನ್ನದೇ ಹಳೆಯ ನೆನಪುಗಳನ್ನು ಕೆದಕಿದ ಹಾಗೆ ಮತ್ತೆ ಕಾಡಿದಂತಾಗಿರಬೇಕು.


Tuesday, October 9, 2012

ಮಂದ-ಹಾಸ


ನಾಲ್ಕು ಸಾಲಿನ ಕವಿತೆ!
ಮಂದ-ಹಾಸ

ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ,
ಪ್ರತಿ ಸಾಲಿಗೂ ಬೇಕು ಕಂಬನಿಯಒರತೆ,
ಸಾಲು ಸಾಲಾಗಿ ಕೊಂಡರೂಚಿಂತೆಗಳ ಕಂತೆ
ಮುಗಿದಂತೆ ಕಾಣದುಬದುಕಿನ ಸಂತೆ,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!               
                     ~೨~
ಅಳು ಅಳುತ್ತಲೇ ನಗಿಸುವುದು ಬದುಕಾದರೆ
ನಗಿಸುತ್ತಲೇ ಅಳಿಸುವುದು ಪ್ರೀತಿಯಂತೆ,
ಪ್ರೀತಿ ಕುರುಡು ಅಂದವರೇ ಎಲ್ಲರೂ
ಕಣ್ಣಿದ್ದೂ ಕುರುಡಾದರೇ ಪ್ರೀತಿಯೆದಿರು!
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!                    
                     ~೩~
ಯಾರಿಗೂ ಬೇಕಿಲ್ಲ ಸುಖ ಸೋಪಾನದ ಜತನ,
ದುಖಃ ದುಮ್ಮಾನಗಳೇ ಅಭಿವ್ಯಕ್ತಿಯ ಚೇತನ,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!                    
                      ~೪~
ಬದುಕೆಂದರೆ ಬರಿ ಅಲ್ಲಆಡಂಬರದ ಸಾಗರ,
ಹುಸಿ ಕೋಪ,ತುಸು ನಗುವ ಕನಸುಗಳಚಪ್ಪರದ ಅಂಬರ,
ಮನದ ಮುಗಿಲಲ್ಲಿ ಇರಲಿ ಕರಗದ ಆಸೆಯ ಕಾಮನ ಬಿಲ್ಲು
ಆಗಾಗ ಕೇಳುತಿರಲಿ ಸವಿಸಿಂಚನದ ತುಂತುರಿನ ಸೊಲ್ಲು,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!
             ~ಅನ್ವೇಷಿ~

Monday, September 24, 2012

ಅವಳೊಂದಿಗೆ ಆ ದಿನಗಳು...: ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...

ಅವಳೊಂದಿಗೆ ಆ ದಿನಗಳು...: ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...:         ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ... ಸುಮ್ಮನೆ ಯಾಕೆ ಬಂದೇ ...   ಈ ಪ್ರೀತಿನೆ ಹಾಗೆ ಒಂದು ದಿನದ ಒಂದು ಕ್ಷಣದ ಸೆಲೆಬ್ರೇಶನ್ ಅಲ್ಲ ..!...

ಅವಳೊಂದಿಗೆ ಆ ದಿನಗಳು...: ಅಕ್ಟೋಬರ್ ನ ಮಳೆ...

ಅವಳೊಂದಿಗೆ ಆ ದಿನಗಳು...: ಅಕ್ಟೋಬರ್ ನ ಮಳೆ...: ಅಕ್ಟೋಬರ್ ನ ಮಳೆ... ಅವಳ ನೆನಪಲ್ಲೀ.. ಸತ್ತ ಮೊದಲ ಪ್ರೀತಿಯ ಸಮಾಧಿಯ ಮೇಲೆ ಕುಳಿತ ಅವಳ ಮನಸಿಗೆ ನನ್ನ ಮಾತುಗಳು ಸಮಾಧಾನ ಅನಿಸಿರಬೆಕು. ಬಿಟ್ಟು ಹೊಗಿದ್ದು ಮರೆತು ...

Sunday, September 23, 2012

ಅವಳ ನೆನಪಲ್ಲೀ...: ನಿರೀಕ್ಷೆ...

ಅವಳ ನೆನಪಲ್ಲೀ...: ನಿರೀಕ್ಷೆ...: ಮುಗಿಯದ ಪಯಣ  ನಿರೀಕ್ಷೆ... ಅಪ್ಪನೆಂದರೆ ಅವ್ವನಿಗೆ ಆಧಾರ ಅವನಿಗೆ ಅವ್ವನೆಂದರೆ ಪ್ರಾಣ, ಮೂವರ ಜೀವನದ ಪಯಣ ಮುಗಿಯದ ದಾರಿಯಲ್ಲಿ ನಿಲ್ಲದೇ ಸಾಗಿತು ತೇರು,         ...

ನಿರೀಕ್ಷೆ...

ಮುಗಿಯದ ಪಯಣ 
ನಿರೀಕ್ಷೆ...

ಅಪ್ಪನೆಂದರೆ ಅವ್ವನಿಗೆ ಆಧಾರ
ಅವನಿಗೆ ಅವ್ವನೆಂದರೆ ಪ್ರಾಣ,

ಮೂವರ ಜೀವನದ ಪಯಣ
ಮುಗಿಯದ ದಾರಿಯಲ್ಲಿ
ನಿಲ್ಲದೇ ಸಾಗಿತು ತೇರು, 
          
ಕೊನೆಯವರೆಗೂ ಬರುವೆನೆಂದ ಯಜಮಾನ
ಈಗ ಜವರಾಯನ ಅತಿಥಿ,
ಬಲು ಕ್ರೂರವಾಗಿ ನಗುತ್ತಿತ್ತು ವಿಧಿ,

ಒತ್ತರಿಸಿ ಬಂದ ದುಃಖವೆಲ್ಲ
ಕತ್ತರಿಸಿ ಬಿದ್ದಿತ್ತು ಉಸಿರ ತಿತ್ತಿಗಳಲ್ಲಿ,
ದಾರಿ ಕವಲಾಗಿತ್ತು ಆಧಾರ ಕಳಚಿ ಹೋಗಿತ್ತು
ನಿಲ್ಲದೇ ಸಾಗಿದಳು ಅವ್ವ ನಿರಾಧಾರವಾಗಿ
ಕಲ್ಲುಮುಳ್ಳಿನ ಹಾದಿಯಲ್ಲಿ,

ಕೈ ಹಿಡಿದು ಮಗನ
ಅಳುವ ಮರೆಸಿ ಚಂಡಿ ಬಿಡಿಸಲೆಂದು
ಬಂದು ಕೂಡುತ್ತಿದ್ದಳು ಹತ್ತಿರದ ರೈಲು ನಿಲ್ದಾಣ
ನಿಲ್ಲದೆ ಓಡುವ ರೈಲು ತೋರಿಸಿ ಅಪ್ಪ ಬರುವನೆಂಬ
ಸುಳ್ಳೆ ಅವನಿಗೆ ಸಮಾಧಾನ,

ಸೂರ್ಯಮುಳುಗಿದ ಸಂಜೆಯಲ್ಲಿ
ದಾಳಿಯಿಟ್ಟಿದ್ದವು ಕರಿಮೋಡಗಳು
ತುಸು ಜೋರಾಗಿಯೆ ಬೀಳುತ್ತಿದ್ದವು
ಮಳೆಯ ಹನಿಗಳು,

ಕಾದ ಇಳೆಯಿಂದ ಹೊಮ್ಮಿತ್ತು
ನೆಮ್ಮದಿಯ ಬಿಸಿಯಸಿರು,
ಅವಳ ಜೀವ ಚೆಲ್ಲಿತ್ತು ಕೊನೆಯದಾಗಿ
ನಿಟ್ಟುಸಿರು,
ಇಂದಿಗೂ ಕಾಯುತ್ತಿರುವನು ಅವ್ವನಿಗಾಗಿ
ಯಾರು ಬಂದಂತಿಲ್ಲ ಅವನಿಗಾಗಿ!

                 ~ಅನ್ವೇಷಿ~