![]() |
ನಾಲ್ಕು ಸಾಲಿನ ಕವಿತೆ! |
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ,
ಪ್ರತಿ ಸಾಲಿಗೂ ಬೇಕು ಕಂಬನಿಯಒರತೆ,
ಸಾಲು ಸಾಲಾಗಿ ಕೊಂಡರೂಚಿಂತೆಗಳ ಕಂತೆ
ಮುಗಿದಂತೆ ಕಾಣದುಬದುಕಿನ ಸಂತೆ,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!
~೨~
ಅಳು ಅಳುತ್ತಲೇ ನಗಿಸುವುದು ಬದುಕಾದರೆ
ನಗಿಸುತ್ತಲೇ ಅಳಿಸುವುದು ಪ್ರೀತಿಯಂತೆ,
ಪ್ರೀತಿ ಕುರುಡು ಅಂದವರೇ ಎಲ್ಲರೂ
ಕಣ್ಣಿದ್ದೂ ಕುರುಡಾದರೇ ಪ್ರೀತಿಯೆದಿರು!
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!
~೩~
ಯಾರಿಗೂ ಬೇಕಿಲ್ಲ ಸುಖ ಸೋಪಾನದ ಜತನ,
ದುಖಃ ದುಮ್ಮಾನಗಳೇ ಅಭಿವ್ಯಕ್ತಿಯ ಚೇತನ,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!
~೪~
ಬದುಕೆಂದರೆ ಬರಿ ಅಲ್ಲಆಡಂಬರದ ಸಾಗರ,
ಹುಸಿ ಕೋಪ,ತುಸು ನಗುವ ಕನಸುಗಳಚಪ್ಪರದ ಅಂಬರ,
ಮನದ ಮುಗಿಲಲ್ಲಿ ಇರಲಿ ಕರಗದ ಆಸೆಯ ಕಾಮನ ಬಿಲ್ಲು
ಆಗಾಗ ಕೇಳುತಿರಲಿ ಸವಿಸಿಂಚನದ ತುಂತುರಿನ ಸೊಲ್ಲು,
ನಕ್ಕಾಗ ಹುಟ್ಟಲಿಲ್ಲ ನಾಲ್ಕು ಸಾಲಿನ ಕವಿತೆ!
~ಅನ್ವೇಷಿ~