![]() |
ಕಣ್ಣ ಹನಿಯೊಂದಿಗೆ... |
ನನ್ನನು ಕಣ್ಣ ರೆಪ್ಪೆಯೊಳಗೆ ಇಟ್ಟು ಕೊಳ್ಳಬೇಡ ಗೆಳತೀ...
ತುಂಬಿ ತುಳುಕುವ ಕನಸುಗಳ ನಡುವೆ ಕಳೆದು ಹೋದೆನು..!
ನಿನ್ನ ಬೆಚ್ಚಗಿನ ಹೃದಯದಲ್ಲಿ ಇಟ್ಟುಕೋ ...
ಪ್ರತಿ ಉಸಿರಲ್ಲೂ ಸದಾ ಹೆಸರಾಗಿ
ಕೊನೆ ಉಸಿರ ವರೆಗೂ ಜೊತೆಯಾಗಿ ಬರುವೇ ...!
ಮತ್ತೆ ಮತ್ತೆ ಎದೆಯ ಕದವ ತೆರೆದೆ
ಕಿವಿಗೊಟ್ಟು ಕೇಳಿದೆ ...?
ಯಾವ ಮಾಯದಲ್ಲೋ ನೀ ಬಂದು ನನ್ನ ಎದೆಯ ಆವರಿಸಿದೆ!
ಬತ್ತಿ ಹೋದ ಒಲವಿನ ಸೆಲೆಗೆ ಮತ್ತೆ ಜೀವ ತುಂಬಿದೆ...
ಗೆಳತಿ...ನೀ ಯಾರೇ ...?
ಈ ಬದುಕು ಎಷ್ಟು ವಿಚಿತ್ರ ಗೊತ್ತಾ
ಗೆಳತೀ ...
ಸಂತೋಷದ ಸಂಭ್ರಮಗಳು..ಹೀಗೆ ಬಂದು ಹಾಗೆ ಸೋಕಿ
ಹೋಗುವ ತಂಗಾಳಿಯ ಹಾಗೆ....
ನಿರಾಸೆಯ ಸುಳಿಗೆ ಸಿಕ್ಕು ನಂಬಿಕೆಯ ಮೂಲಗಳೇ ಕಿತ್ತು
ಹೋಗಿರಲು ಬದುಕಿಗೆ ಭರವಸೆಯ ಬೆಳಕು ಎಲ್ಲಿದೇ ...
ಇಂತಿ ನಿನ್ನ ...
ಅನ್ವೇಷಿ ....
it's too touching
ReplyDelete