![]() |
ಮುಗಿಯದ ಪಯಣ |
ಅಪ್ಪನೆಂದರೆ ಅವ್ವನಿಗೆ ಆಧಾರ
ಅವನಿಗೆ ಅವ್ವನೆಂದರೆ ಪ್ರಾಣ,
ಮೂವರ ಜೀವನದ ಪಯಣ
ಮುಗಿಯದ ದಾರಿಯಲ್ಲಿ
ನಿಲ್ಲದೇ ಸಾಗಿತು ತೇರು,
ಕೊನೆಯವರೆಗೂ ಬರುವೆನೆಂದ ಯಜಮಾನ
ಈಗ ಜವರಾಯನ ಅತಿಥಿ,
ಬಲು ಕ್ರೂರವಾಗಿ ನಗುತ್ತಿತ್ತು ವಿಧಿ,
ಒತ್ತರಿಸಿ ಬಂದ ದುಃಖವೆಲ್ಲ
ಕತ್ತರಿಸಿ ಬಿದ್ದಿತ್ತು ಉಸಿರ ತಿತ್ತಿಗಳಲ್ಲಿ,
ದಾರಿ ಕವಲಾಗಿತ್ತು ಆಧಾರ ಕಳಚಿ ಹೋಗಿತ್ತು
ನಿಲ್ಲದೇ ಸಾಗಿದಳು ಅವ್ವ ನಿರಾಧಾರವಾಗಿ
ಕಲ್ಲುಮುಳ್ಳಿನ ಹಾದಿಯಲ್ಲಿ,
ಕೈ ಹಿಡಿದು ಮಗನ
ಅಳುವ ಮರೆಸಿ ಚಂಡಿ ಬಿಡಿಸಲೆಂದು
ಬಂದು ಕೂಡುತ್ತಿದ್ದಳು ಹತ್ತಿರದ ರೈಲು ನಿಲ್ದಾಣ
ನಿಲ್ಲದೆ ಓಡುವ ರೈಲು ತೋರಿಸಿ ಅಪ್ಪ ಬರುವನೆಂಬ
ಸುಳ್ಳೆ ಅವನಿಗೆ ಸಮಾಧಾನ,
ಸೂರ್ಯಮುಳುಗಿದ ಸಂಜೆಯಲ್ಲಿ
ದಾಳಿಯಿಟ್ಟಿದ್ದವು ಕರಿಮೋಡಗಳು
ತುಸು ಜೋರಾಗಿಯೆ ಬೀಳುತ್ತಿದ್ದವು
ಮಳೆಯ ಹನಿಗಳು,
ಕಾದ ಇಳೆಯಿಂದ ಹೊಮ್ಮಿತ್ತು
ನೆಮ್ಮದಿಯ ಬಿಸಿಯಸಿರು,
ಅವಳ ಜೀವ ಚೆಲ್ಲಿತ್ತು ಕೊನೆಯದಾಗಿ
ನಿಟ್ಟುಸಿರು,
ಇಂದಿಗೂ ಕಾಯುತ್ತಿರುವನು ಅವ್ವನಿಗಾಗಿ
ಯಾರು ಬಂದಂತಿಲ್ಲ ಅವನಿಗಾಗಿ!
~ಅನ್ವೇಷಿ~
ಚೆನ್ನಾಗಿವೆ ಭಾವಗಳು ..ಮುಂದುವರೆಸಿ .ಇಷ್ಟವಾದವು
ReplyDeletetumbaa eshtavaayitu matte bareyiri.
ReplyDelete