ನನ್ನ ನೂರೆಂಟು ಕವಿತೆಗಳ ಪ್ರಪಂಚಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ ಈ ನನ್ನ ಮನದ ಹಂಬಲದ ಕನವರಿಕೆಗಳು ನಿಮ್ಮ ಮನದ ಬಾಗಿಲನ್ನು ತಟ್ಟುತ್ತವೆ ಅನ್ನುವ ನಂಬಿಕೆಯೊಂದಿಗೆ...
ಅನ್ವೆಷಿಯ ಕಲ್ಪನಾ ಲೋಕ...
ಅನ್ವೆಷಿಯ ಕಲ್ಪನಾ ಲೋಕಕ್ಕೆ ನಿಮಗೆಲ್ಲಾ ಆದರದ ಸುಸ್ವಾಗತ...
Monday, September 24, 2012
ಅವಳೊಂದಿಗೆ ಆ ದಿನಗಳು...: ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...
ಅವಳೊಂದಿಗೆ ಆ ದಿನಗಳು...: ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ...: ಸುಮ್ಮನೆ ಯಾಕೆ ಬಂದೆ ನೀ ನನ್ನ ಕಣ್ಣಮುಂದೆ ... ಸುಮ್ಮನೆ ಯಾಕೆ ಬಂದೇ ... ಈ ಪ್ರೀತಿನೆ ಹಾಗೆ ಒಂದು ದಿನದ ಒಂದು ಕ್ಷಣದ ಸೆಲೆಬ್ರೇಶನ್ ಅಲ್ಲ ..!...
ಅವಳೊಂದಿಗೆ ಆ ದಿನಗಳು...: ಅಕ್ಟೋಬರ್ ನ ಮಳೆ...
ಅವಳೊಂದಿಗೆ ಆ ದಿನಗಳು...: ಅಕ್ಟೋಬರ್ ನ ಮಳೆ...: ಅಕ್ಟೋಬರ್ ನ ಮಳೆ... ಅವಳ ನೆನಪಲ್ಲೀ.. ಸತ್ತ ಮೊದಲ ಪ್ರೀತಿಯ ಸಮಾಧಿಯ ಮೇಲೆ ಕುಳಿತ ಅವಳ ಮನಸಿಗೆ ನನ್ನ ಮಾತುಗಳು ಸಮಾಧಾನ ಅನಿಸಿರಬೆಕು. ಬಿಟ್ಟು ಹೊಗಿದ್ದು ಮರೆತು ...
Sunday, September 23, 2012
ಅವಳ ನೆನಪಲ್ಲೀ...: ನಿರೀಕ್ಷೆ...
ಅವಳ ನೆನಪಲ್ಲೀ...: ನಿರೀಕ್ಷೆ...: ಮುಗಿಯದ ಪಯಣ ನಿರೀಕ್ಷೆ... ಅಪ್ಪನೆಂದರೆ ಅವ್ವನಿಗೆ ಆಧಾರ ಅವನಿಗೆ ಅವ್ವನೆಂದರೆ ಪ್ರಾಣ, ಮೂವರ ಜೀವನದ ಪಯಣ ಮುಗಿಯದ ದಾರಿಯಲ್ಲಿ ನಿಲ್ಲದೇ ಸಾಗಿತು ತೇರು, ...
ನಿರೀಕ್ಷೆ...
![]() |
ಮುಗಿಯದ ಪಯಣ |
ಅಪ್ಪನೆಂದರೆ ಅವ್ವನಿಗೆ ಆಧಾರ
ಅವನಿಗೆ ಅವ್ವನೆಂದರೆ ಪ್ರಾಣ,
ಮೂವರ ಜೀವನದ ಪಯಣ
ಮುಗಿಯದ ದಾರಿಯಲ್ಲಿ
ನಿಲ್ಲದೇ ಸಾಗಿತು ತೇರು,
ಕೊನೆಯವರೆಗೂ ಬರುವೆನೆಂದ ಯಜಮಾನ
ಈಗ ಜವರಾಯನ ಅತಿಥಿ,
ಬಲು ಕ್ರೂರವಾಗಿ ನಗುತ್ತಿತ್ತು ವಿಧಿ,
ಒತ್ತರಿಸಿ ಬಂದ ದುಃಖವೆಲ್ಲ
ಕತ್ತರಿಸಿ ಬಿದ್ದಿತ್ತು ಉಸಿರ ತಿತ್ತಿಗಳಲ್ಲಿ,
ದಾರಿ ಕವಲಾಗಿತ್ತು ಆಧಾರ ಕಳಚಿ ಹೋಗಿತ್ತು
ನಿಲ್ಲದೇ ಸಾಗಿದಳು ಅವ್ವ ನಿರಾಧಾರವಾಗಿ
ಕಲ್ಲುಮುಳ್ಳಿನ ಹಾದಿಯಲ್ಲಿ,
ಕೈ ಹಿಡಿದು ಮಗನ
ಅಳುವ ಮರೆಸಿ ಚಂಡಿ ಬಿಡಿಸಲೆಂದು
ಬಂದು ಕೂಡುತ್ತಿದ್ದಳು ಹತ್ತಿರದ ರೈಲು ನಿಲ್ದಾಣ
ನಿಲ್ಲದೆ ಓಡುವ ರೈಲು ತೋರಿಸಿ ಅಪ್ಪ ಬರುವನೆಂಬ
ಸುಳ್ಳೆ ಅವನಿಗೆ ಸಮಾಧಾನ,
ಸೂರ್ಯಮುಳುಗಿದ ಸಂಜೆಯಲ್ಲಿ
ದಾಳಿಯಿಟ್ಟಿದ್ದವು ಕರಿಮೋಡಗಳು
ತುಸು ಜೋರಾಗಿಯೆ ಬೀಳುತ್ತಿದ್ದವು
ಮಳೆಯ ಹನಿಗಳು,
ಕಾದ ಇಳೆಯಿಂದ ಹೊಮ್ಮಿತ್ತು
ನೆಮ್ಮದಿಯ ಬಿಸಿಯಸಿರು,
ಅವಳ ಜೀವ ಚೆಲ್ಲಿತ್ತು ಕೊನೆಯದಾಗಿ
ನಿಟ್ಟುಸಿರು,
ಇಂದಿಗೂ ಕಾಯುತ್ತಿರುವನು ಅವ್ವನಿಗಾಗಿ
ಯಾರು ಬಂದಂತಿಲ್ಲ ಅವನಿಗಾಗಿ!
~ಅನ್ವೇಷಿ~
Monday, September 10, 2012
ಅವಳ ನೆನಪಲ್ಲೀ...
![]() |
ಶೀರ್ಷಿಕೆ ಸೇರಿಸಿ |
(೧)
ಬಾನ ಅಂಚಿನ ತೀರದಲ್ಲಿ
ಕೊನೆ ಇಲ್ಲದ ಕಡಲು,
ನೆಸರನು ಓಡಿರುವಾ ಸೆರಲು
ಅದರ ಒಡಲು,
ಮತ್ತೆ ಮತ್ತೆ ಬಂದು ತಾಕಿವೆ
ನಿನ್ನ ನೆನಪಿನ ಅಲೆಗಳು,
ಗೆಳತೀ, ಕಂಬನಿಯಲ್ಲೆ ತುಂಬಿ ಹೋಗಿದೆ
ನನ್ನ ಮಡಿಲು,
(೨)
ಗೆಳತೀ, ಹೇಗೆ ಹಿಡಿದು ಇಡಲಿ
ಈ ಹುಚ್ಚು ಮನಸ,
ನೀನಿರದೆ ಯುಗವಾಗಿದೆ
ಒಂದೊಂದು ನಿಮಿಷ,
ಪ್ರತಿ ಉಸಿರಲು ಬೆರೆತು
ಹೋಗಿರಲು ನಿನ್ನ ಹೆಸರು,
ನೆನೆ ನೆನೆದು ಚೆಲ್ಲಿದೆ ನಿಟ್ಟುಸಿರು.
~ಅನ್ವೇಷಿ ~
Saturday, September 8, 2012
Subscribe to:
Posts (Atom)